ಅಬ್ಬಾ…ಜಿಯೋದ ಲಾಭ ಕೇಳಿದರೆ ಶಾಕ್ ಆಗ್ತೀರಾ!

Published on: Tuesday, October 17th, 2017,8:43 am

ಮುಂಬೈ: ಟೆಲಿಕಾಂ ವಲದಯಲ್ಲಿ ಬಾರಿ ಬಿರುಗಾಳಿ ಬೀಸಿ ತನ್ನ ಸಹವರ್ತಿ ನೆಟ್ ವರ್ಕ್ ಕಂಪನಿಗಳಿಗೆ ನಡುಕ ಹುಟ್ಟಿಸಿ,  ಅತಿ ಕಡಿಮೆ ಅವಧಿಯಲ್ಲಿ  ಟೆಲಿಕಾಂ ವಲಯದಲ್ಲಿ ಸಂಚಲನ ಸೃಷ್ಟಿಸಿರುವ ಜಿಯೋದ ತ್ರೈಮಾಸಿಕ ವರದಿ ಕಳೆದ ಶುಕ್ರವಾರ ಬಿಡುಗೆಯಾಗಿತ್ತು.

ಆಗ ಬಿಡುಗಡೆಯಾದ ವರದಲ್ಲಿ   ರಿಲಯನ್ಸ್‌ ಇಂಡಸ್ಟ್ರೀಸ್‌ಗೆ 271 ಕೋಟಿ ರೂ. ನಷ್ಟ ಉಂಟು ಮಾಡಿದೆ ಎಂದು  ಹೇಳಲಾಗಿತ್ತು. . ಆದರೆ ಸಿಕ್ಕಿರುವ ಹೊಸ ಮಾಹಿತಿ ಪ್ರಕಾರ ಬರೀ ಇದೀಗ ಬಡ್ಡಿ, ತೆರಿಗೆ ಪಾವತಿಸುವ ಮುನ್ನ ಜಿಯೋಗೆ 260 ಕೋಟಿ ರೂ. ಲಾಭವಾಗಿದೆ ಎಂದು ಕಂಪನಿ ಹೇಳಿದೆ.

ಆದರೆ ಇಂದು ಬಡ್ಡಿ, ತೆರಿಗೆ ಪಾವತಿಸುವ ಮುನ್ನ ರಿಲಯನ್ಸ್ ಜಿಯೋ ಇನ್ಫೋಕಾಮ್‌ಗೆ ಲಾಭವಾಗಿದೆ. ರಿಲಯನ್ಸ್ ಜಿಯೋ ಇನ್ಫೋಕಾಮ್ 260 ಕೋಟಿ ರೂ. ಲಾಭಗಳಿಸಿದೆ ಎಂದು ಕಂಪನಿ ಹೇಳಿದೆ. ರಿಲಯನ್ಸ್ ಮುಖ್ಯಸ್ಥ, ಬಿಲಿಯನಿರ್ ಮುಖೇಶ್ ಅಂಬಾನಿ ಮೊದಲ ಬಾರಿಗೆ ಜಿಯೋ ಆದಾಯ, ಲಾಭಗಳ ಕುರಿತು ಇಂದು ಮಾಹಿತಿ ನೀಡಿದ್ದಾರೆ.

ಕಳೆದ ಶುಕ್ರವಾರ ಜುಲೈ-ಸೆಪ್ಟೆಂಬರ್ ಅವಧಿಯ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಶೇ. 12.17ರಷ್ಟು ಏಕೀಕೃತ ನಿಖರ ಲಾಭ ಗಳಿಸಿದೆ. ಆದರೆ ಜಿಯೋಗೆ ಮಾತ್ರ 271 ಕೋಟಿ ರೂ. ನಷ್ಟ ಉಂಟು ಮಾಡಿದೆ ಎಂದು ಕಂಪನಿ ಹೇಳಿತ್ತು.

Like us on facebook

Leave a Reply

Your email address will not be published. Required fields are marked *

*

code

LATEST NEWS