ಅಯೋಧ್ಯೆಯಲ್ಲಿ ಶ್ರೀರಾಮನ ಪತ್ರಿಮೆಗೆ 10 ಬೆಳ್ಳಿ ಬಾಣಗಳನ್ನು ನೀಡಲು ಮುಂದಾದ ಶಿಯಾ ವಕ್ಫ್ ಮಂಡಳಿ

Published on: Wednesday, October 18th, 2017,8:32 am

ಲಖನೌ : ಅಯೋಧ್ಯೆಯ ಸರಯೂ ನದಿ ತಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ 100 ಮೀ. ಎತ್ತರದ ಶ್ರೀರಾಮನ ವಿಗ್ರಹಕ್ಕೆ 10 ಬೆಳ್ಳಿ ಬಾಣಗಳನ್ನು ನೀಡುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಯುಪಿ ಶಿಯಾ ವಕ್ಫ್ ಮಂಡಳಿ ಪ್ರಸ್ತಾವನೆಯನ್ನು ಕಳುಹಿಸಿದೆ.

ಶಿಯಾಬೋರ್ಡ್ ಅಧ್ಯಕ್ಷ ವಸೀಮ್ ರಿಜ್ಜಿ ಈ ಕುರಿತು ಮಾತನಾಡಿದ್ದು, ವಕ್ಫ್ ಬೋರ್ಡ್ ಮೂಲಕ ಶ್ರೀರಾಮನ ಪ್ರತಿಮೆಗೆ ಬೆಳ್ಳಿ ಬಾಣಗಳನ್ನು ಉಡುಗೊರೆಯಾಗಿ ನೀಡಬೇಕೆಂದು ಕೆಲವು ಶಿಯಾ ಮುಸ್ಲಿಮರು ಸಲಹೆ ನೀಡಿದ್ದು, ರಾಮನ ಬೃಹತ್ ವಿಗ್ರಹಕ್ಕೆ 10 ಬೆಳ್ಳಿಬಾಣಗಳನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಮರ್ಯಾದಾ ಪುರುಶೋತ್ತಮನಾದ ಶ್ರೀರಾಮ ತನ್ನ ಬಾಣಗಳಿಂದ ನರರಾಕ್ಷಸರನ್ನು ನಾಶ ಮಾಡಿದ ರೀತಿಯಲ್ಲಿ ಭಾರತ ಭಯೋತ್ಪಾದನೆ ಮುಕ್ತ ರಾಷ್ಟ್ರವಾಗಲಿ. ಇದರಿಂದ ಸರ್ವ ಧರ್ಮಿಯರು ಶಾಂತಿಯಿಂದ ನೆಲೆಸುವಂತಾಗಲಿ ಎಂದು ರಿಜ್ಜಿ ಅವರು ಯೋಗಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Like us on facebook

Leave a Reply

Your email address will not be published. Required fields are marked *

*

code

LATEST NEWS