ಇನ್ಫೋಸಿಸ್ ಗೆ 6 ಸಾವಿರ ಎಂಜಿನಿಯರ್ಸ್ ನೇಮಕ

Published on: Monday, September 11th, 2017,3:47 pm

ಬೆಂಗಳೂರು : ವರ್ಷಕ್ಕೆ 6 ಸಾವಿರ ಎಂಜಿನಿಯರ್ ಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಇನ್ಫೋಸಿಸ್ ನೇಮಕ ಮಾಡಿಕೊಳ್ಳಲಿದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಇನ್ಫೋಸಿಸ್ ಹಂಗಾಮಿ ಸಿಇಒ ಮತ್ತು ಎಂಡಿ ಯು.ಬಿ ಪ್ರವೀಣ್ ರಾವ್ ಅವರು ಹೂಡಿಕೆದಾರರ ಸಭೆಯಲ್ಲಿ ಮಾತನಾಡಿ, ನೇಮಕ ಪ್ರಕ್ರಿಯೆಯನ್ನು ಮುಂದುವರಿಸಲಿದ್ದೇವೆ. ಈ ವರ್ಷ ಹೆಚ್ಚುವರಿಯಾಗಿ 6.000 ನೇಮಕಗಳನ್ನು ಮಾಡಿಕೊಳ್ಳಲಿದ್ದೇವೆ. ನೇಮಕ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಮುಂದಿನ ಎರಡು ವರ್ಷ ಇದೇ ರೀತಿ ನೇಮಕಗಳು ನಡೆಯಲಿವೆ.

ಮಾರುಕಟ್ಟೆ ಮತ್ತು ಬೆಳವಣಿಗೆಗಳನ್ನು ಆಧರಿಸಿ ನೇಮಕಗಳು ನಡೆಯಲಿವೆ. ಭಾರತದಲ್ಲಿ ಮಾತ್ರವಲ್ಲ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲೂ ಹೆಚ್ಚಿನ ನೇಮಕಕ್ಕೆ ಉತ್ಸುಕತೆ ತೋರಿಸಿದೆ.

Like us on facebook

Leave a Reply

Your email address will not be published. Required fields are marked *

*

code

LATEST NEWS