ನ್ಯೂಸ್ ಡೆಸ್ಕ್ : ಕೀನ್ಯಾ ಸರ್ಕಾರ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಜಗತ್ತಿನಲ್ಲೇ ಅತಿ ಕಠಿಣ ಕಾಯ್ದೆ ಜಾರಿ ಮಾಡಿದೆ. ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಜಾರಿಗೊಂಡ ಕಾಯ್ದೆಯ ಪ್ರಕಾರ ಪ್ಲಾಸ್ಟಿಕ್ ಚೀಲ ಉತ್ಪಾದಿಸುತ್ತಿದ್ದರೆ, ಮಾರಾಟ ಮಾಡುತ್ತಿದ್ದರೆ ಅಥವಾ ಬಳಸುತ್ತಿದ್ದರೆ, ಅವರಿಗೆ ನಾಲ್ಕು ವರ್ಷ ಕಠಿಣ ಶಿಕ್ಷೆ ಮತ್ತು 25.5 ಲಕ್ಷ ರೂ. ದಂಡವನ್ನು ಸರ್ಕಾರ ವಿಧಿಸುತ್ತದೆ.
ಹಂತ ಹಂತವಾಗಿ ಪ್ಲಾಸ್ಟಿಕ್ ಬ್ಯಾನ್ ಗೆ ಸರ್ಕಾರ ಮುಂದಾಗಿದ್ದು, ಮೊದಲ ಹಂತದಲ್ಲಿ ಪ್ಲಾಸ್ಟಿಕ್ ಚೀಲಕ್ಕೆ ನಿಷೇಧ ಹೇರಲಾಗಿದೆ. ಸರ್ಕಾರದ ನಿರ್ಧಾರಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದರೆ, ಮತ್ತೆ ಕೆಲವರು ಅಪಸ್ವರ ತೆಗೆದಿದ್ದಾರೆ. ಪ್ಲಾಸ್ಟಿಕ್ ಬ್ಯಾನ್ ನಿಂದ 176 ಉತ್ಪಾದನಾ ಘಟಕಗಳು ಮುಚ್ಚುವ ಜೊತೆಗೆ, ಸುಮಾರು 60 ಸಾವಿರ ಮಂದಿಗೆ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ.
ಈಗಾಗಲೇ ಹಲವು ರಾಷ್ಟ್ರಗಳು ಪ್ಲಾಸ್ಟಿಕ್ ಬ್ಯಾನ್ ಮಾಡಿವೆ. ಆದರೆ ಕೀನ್ಯಾ ಮಾತ್ರ ಕಠಿಣ ಕಾನೂನು ರೂಪಿಸಿ ಅಚ್ಚರಿ ಮೂಡಿಸಿದೆ.