ಕ್ವಿಂಟನ್ ಡಿ ಕಾಕ್ – ಆಮ್ಲಾ ದಾಖಲೆಯ ಜತೆಯಾಟ : ಬಾಂಗ್ಲಾ ವಿರುದ್ಧ ಆಫ್ರಿಕಾಗೆ ಭರ್ಜರಿ ಗೆಲುವು

Published on: Monday, October 16th, 2017,10:46 am

ಕಿಂಬರ್ಲಿ : ದಕ್ಷಿಣ ಆಫ್ರಿಕಾ ತಂಡದ ಬಾಂಗ್ಲಾದೇಶದ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 10 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಬಾಂಗ್ಲಾದೇಶ ನೀಡಿದ್ದ 278 ರನ್ ಗಳ ಗುರಿ ಬೆನ್ನತ್ತಿದ್ದ ದ.ಆಫ್ರಿಕಾ ತಂಡ ಪರ ಆರಂಭಿಕ ಆಟಗಾರರಾದ ಕ್ವಿಂಟನ್ ಡಿ ಕಾಕ್ (168*) ಮತ್ತು ಹಾಶಿಂ ಆಮ್ಲ (110*) ಬಾರಿಸಿದ ಶತಕದ ನೆರವಿನಿಂದ ದ.ಆಫ್ರಿಕಾ ತಂಡ ಬಾಂಗ್ಲಾದೇಶ ತಂಡವನ್ನು ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ ಗಳಿಂದ ಮಣಿಸಿದೆ. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ1-0 ಮುನ್ನಡೆಗೇರಿದೆ.

ಇದು ದಕ್ಷಿಣ ಆಫ್ರಿಕಾ ಪರ ಏಕದಿನ ಕ್ರಿಕೆಟ್ ನಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೇ ಆಡದೇ ದಾಖಲೆಯ ಜೊತೆಯಾಟ ಎನಿಸಿದೆ. ಇದಕ್ಕೂ ಮೊದಲು 2006 ರಲ್ಲಿ ಶ್ರೀಲಂಕಾದ ತರಾಂಗ ಮತ್ತು ಸನತ್ ಜಯಸೂರ್ಯ 286 ರನ್ ಜೊತೆಯಾಟ ಆಡಿದ್ದರು.

Like us on facebook

Leave a Reply

Your email address will not be published. Required fields are marked *

*

code

LATEST NEWS