ಗೂಗಲ್ ಆ್ಯಂಡ್ರಾಯ್ಡ್ 8.0 ಆವೃತ್ತಿಯ ಹೆಸರೇನು ಗೊತ್ತಾ ?

Published on: Wednesday, August 23rd, 2017,10:36 am

 

ಹೊಸದಿಲ್ಲಿ:-  ಗೂಗಲ್ ಸಂಸ್ಥೆಯ ಆ್ಯಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಂನ 8.0 ಆವೃತ್ತಿಗೆ ಭಾರತದಲ್ಲಿ ಜನಪ್ರಿಯವಾಗಿರುವ ‘ಓರಿಯೋ’ ಬಿಸ್ಕೆಟ್ ನ ಹೆಸರಿಡಲಾಗಿದೆ.

Android-8-Name

ಆ್ಯಂಡ್ರಾಯ್ಡ್ ಓರಿಯೋ ಈ ಹಿಂದಿನ ಆವೃತ್ತಿಗಳಿಗಿಂತ ಹೆಚ್ಚು ಸ್ಮಾರ್ಟ್, ಪವರ್‌ಫುಲ್ ಮತ್ತು ಹೆಚ್ಚು ಆಕರ್ಷಕವಾಗಿರಲಿದೆ ಎಂದು ಆ್ಯಂಡ್ರಾಯ್ಡ್ ಕಂಪನಿ ಟ್ವೀಟ್ ಮಾಡಿದೆ.

orieo

ಆಗಸ್ಟ್ 18ರಂದು ಸಂಪೂರ್ಣ ಸೂರ್ಯಗ್ರಹಣದಂದು ಆಂಡ್ರಾಯ್ಡ್ 8.0 ಆವೃತ್ತಿಯನ್ನು ಪರಿಚಯಿಸಲಾಗಿತ್ತು. ತನ್ನ ಓಪರೇಟಿಂಗ್ ಸಿಸ್ಟಂಗಳಿಗೆ ತಿನಿಸುಗಳ ಹೆಸರನ್ನಿಟ್ಟುಕೊಂಡು ಬಂದಿರುವ ಗೂಗಲ್ ಈ ಬಾರಿ ‘ಆ್ಯಂಡ್ರಾಯ್ಡ್ ಓರಿಯೋ’ ಎಂದು ನಾಮಕರಣ ಮಾಡಿದೆ.

ಈ ಹಿಂದೆ ಆ್ಯಂಡ್ರಾಯ್ಡ್ ಕಿಟ್ ಕ್ಯಾಟ್ ಬಿಡುಗಡೆ ವೇಳೆ ಒಪ್ಪಂದ ಮಾಡಿಕೊಂಡಂತೆ ಈ ಬಾರಿಯೂ ಬಿಸ್ಕೆಟ್ ಹೆಸರಿಡಲು ಕ್ಯಾಡ್ಬರಿ ಕಂಪನಿ ಜತೆ ಗೂಗಲ್ ಒಪ್ಪಂದ ಮಾಡಿಕೊಂಡಿದೆ. ಇನ್ನೇನು ನೂತನ ಸ್ಮಾರ್ಟ್‌ಫೋನ್‌ಗಳಲ್ಲಿ ‘ಆಂಡ್ರಾಯ್ಡ್ ಒರಿಯೊ’ ಪ್ರವೇಶವಾಗಲಿದೆ. ಈಗಾಗಲೇ ಹಲವು ಕಂಪನಿಗಳು ತಮ್ಮ ನೂತನ ಫೋನ್ ಗಳಲ್ಲಿ ‘ಆಂಡ್ರಾಯ್ಡ್ ಒರಿಯೊ’ ಕಾರ್ಯಚರಣಾ ವ್ಯವಸ್ಥೆಯನ್ನು ಘೋಷಣೆ ಮಾಡಿವೆ.

Like us on facebook

Leave a Reply

Your email address will not be published. Required fields are marked *

*

code

LATEST NEWS