ಗ್ರಾಹಕರಿಗೆ ಜಿಎಸ್‌ಟಿ ರಿಲೀಫ್‌ : 27 ಸರಕುಗಳ ತೆರಿಗೆ ದರ ಕಡಿತ, ಟ್ಯಾಕ್ಸ್‌ ಕಮ್ಮಿಯಾದ ವಸ್ತುಗಳ ಪಟ್ಟಿ ಹೀಗಿದೆ!

Published on: Saturday, October 7th, 2017,2:43 pm

ನವದೆಹಲಿ: ಕಳೆದ ಮೂರು ತಿಂಗಳ ಹಿಂದೆ ಜಾರಿಗೆ ಬಂದಿರುವ ಜಿಎಸ್‌ಟಿ ಮಂಡಳಿ ಸಭೆಯು ಸಣ್ಣ ಉದ್ಯಮಿದಾರರು ಮತ್ತು ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಸುಧಾರಣೆಗಳನ್ನು ಪ್ರಕಟಿಸಿದ್ದು, 27 ಸರಕುಗಳು ಮತ್ತು ಸೇವೆಗಳ ತೆರಿಗೆ ದರವನ್ನು ಇಳಿಕೆ ಮಾಡಲಾಗಿದೆ.

ಶುಕ್ರವಾರ ಸುದೀರ್ಘವಾಗಿ ನಡೆದ  ಜಿಎಸ್‌ಟಿ ಮಂಡಳಿಯ 22ನೇ ಸಭೆ ಬಳಿಕ ಬಳಿಕ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ನೇತೃತ್ವದಲ್ಲಿ  ಸಚಿವ ಸುದ್ದಿಗೋಷ್ಠಿ ನಡೆಸಿದರು.

27 ಸರಕುಗಳು ಮತ್ತು ಸೇವೆಗಳ ತೆರಿಗೆ ದರ ಇಳಿಸಲಾಗಿದ್ದು ಅವುಗಳ ಮಾಹಿತಿ ಹೀಗಿದೆ.

ಸ್ಟೇಷನರಿ ವಸ್ತುಗಳು, ಮಾರ್ಬಲ್‌ ಮತ್ತು ಗ್ರಾನೈಟ್‌ ಬಿಟ್ಟು ನೆಲಕ್ಕೆ ಹಾಸುವ ಕಲ್ಲುಗಳು, ಡೀಸೆಲ್‌ ಎಂಜಿನ್‌ ಬಿಡಿಭಾಗಗಳು ಮತ್ತು ಪಂಪ್‌ಗಳ ತೆರಿಗೆ ಶೇ.28ರಿಂದ ಶೇ.18ಕ್ಕೆ ಇಳಿಕೆ. ಎಲೆಕ್ಟ್ರಾನಿಕ್ ತ್ಯಾಜ್ಯಗಳ ಮೇಲಿನ ತೆರಿಗೆ ಶೇ.28ರಿಂದ ಶೇ.5ಕ್ಕೆ ಇಳಿಕೆಯಾಗಿದೆ.

ತೆರಿಗೆ ದರವನ್ನು ಶೇ.12ರಿಂದ ಶೇ. 5ಕ್ಕೆ ಬ್ರಾಂಡ್‌ರಹಿತ ಕುರುಕಲು ತಿಂಡಿ, ಬ್ರಾಂಡ್‌ರಹಿತ ಆಯುರ್ವೇದ ಔಷಧಗಳು, ಚಪಾತಿ ಮತ್ತು ಕಕ್ರಾ, ಒಣಗಿಸಿದ ಮಾವಿನಕಾಯಿ ತುಂಡುಗಳ ಮೇಲಿನ ದರವನ್ನು ಇಳಿಸಲಾಗಿದೆ. ಹಾಗೇ  ಕೈಮಗ್ಗದ ಬಟ್ಟೆ ಮೇಲಿನ ತೆರಿಗೆ ಶೇ.18ರಿಂದ ಶೇ.12ಕ್ಕೆ ಇಳಿಕೆ ಮಾಡಲಾಗಿದೆ.

ಇದೇ ವೇಳೆ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯ (ಐಸಿಡಿಎಸ್‌) ಆಹಾರ ಪೊಟ್ಟಣಗಳ ತೆರಿಗೆ ದರವನ್ನೂ ಶೇ.12ರಿಂದ ಶೇ. 5ಕ್ಕೆ ಇಳಿಸಲಾಗಿದ್ದು  ಕಾರ್ಮಿಕರನ್ನು ಬಳಸಿದ ಸರ್ಕಾರದ ಕಾಮಗಾರಿ ಯೋಜನೆಗಳ ಗುತ್ತಿಗೆಗಳನ್ನು ಶೇ.5ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ನೀರಾವರಿ ಯೋಜನೆಗಳ ಕಾಮಗಾರಿ ಕೂಡ ಇದರಲ್ಲಿ ಸೇರುತ್ತದೆ ಅಂತಾ  ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

Like us on facebook

Leave a Reply

Your email address will not be published. Required fields are marked *

*

code

LATEST NEWS