ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್ ಕೊಳ್ಳುವ ಮುನ್ನ ಇದನ್ನ ಓದಿ…

Published on: Sunday, August 20th, 2017,10:35 am

ಹೈದರಾಬಾದ್ : ಈ ಮಧ್ಯೆ ಚೀನಾ ಅಗ್ಗದ ದರದಲ್ಲಿ ಸೊಳ್ಳೆ ಬ್ಯಾಟ್ ಗಳನ್ನು ತಯಾರಿಸಿದ್ದು ಈ ಬ್ಯಾಟ್ ಗಳು ಅಪಾಯಕಾರಿ ಎಂಬ ಆಘಾತಕಾರಿ ವಿಷಯವನ್ನು ಸಂಶೋಧಕರು ಬಹಿರಂಗಪಡಿಸಿದ್ದಾರೆ.

china m la
ಚೀನಾ ನಿರ್ಮಿತ ಅಗ್ಗದ ಸೊಳ್ಳೆ ಬ್ಯಾಟುಗಳಲ್ಲಿ ಮಿತಿ ಮೀರಿದ ಸೀಸದ ಅಂಶವು ಪರಿಸರ ಹಾಗೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೈದರಾಬಾದ್ ನ ಸೆಂಟರ್ ಫಾರ್ ಮಟೀರಿಯಲ್ಸ್ ಫಾರ್ ಇಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಸಂಸ್ಥೆಯ ಸಂಶೋಧಕರು ತಿಳಿಸಿದ್ದಾರೆ.

ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್ ಗಳಲ್ಲಿ ಮೀತಿ ಮೀರಿದ ಸೀಸದ ಅಂಶ ಇರುವುದು ದೃಢಪಟ್ಟಿದೆ. ಇನ್ನು ಯೂರೋಪ್ ಒಕ್ಕೂಟದ ತಜ್ಞರು ನಿಗದಿಪಡಿಸಿರುವ ಮಾನದಂಡಗಳ ಅನುಸಾರ, ಸೊಳ್ಳೆ ಬ್ಯಾಟ್ ಗಳಲ್ಲಿ ಸೀಸದ ಅಂಶವು ಗರಿಷ್ಠ 1000 ಪಿಪಿಎಂ(ಪಾರ್ಟ್ಸ್ ಪರ್ ಮಿಲಿಯನ್) ಇರಬೇಕು. ಆದರೆ ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್ ಗಳಲ್ಲಿ ಇದರ ಅಂಶ 3000 ಪಿಪಿಎಂನಿಂದ 82 ಸಾವಿರ ಪಿಪಿಎಂವರೆಗೂ ಇದೆ ಎಂದು ತಿಳಿದುಬಂದಿದೆ.

lead la

ಸೀಸ:  ಸಂಗ್ರಹ ಚಿತ್ರ

ಅಂಕಿ-ಅಂಶದ ಪ್ರಕಾರ ಫೆಬ್ರವರಿಯಿಂದ ನವೆಂಬರ್ 2016ರವರೆಗೆ ಚೀನಾದಿಂದ ೧ ಲಕ್ಷಕ್ಕೂ ಹೆಚ್ಚು ಸೊಳ್ಳೆ ಬ್ಯಾಟ್ ಗಳನ್ನು ಭಾರತ ಆಮದು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

Like us on facebook

Leave a Reply

Your email address will not be published. Required fields are marked *

*

code

LATEST NEWS