ಚೀನಾ ಸೈನಿಕರಿಗೆ ‘ನಮಸ್ತೆ’ ಪಾಠ ಮಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌

Published on: Monday, October 9th, 2017,8:37 am

ನವದೆಹಲಿ: ಇದೇ ಮೊದಲ ಬಾರಿಗೆ ರಕ್ಷಣಾ ಸಚಿವೆಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಸಿಕ್ಕಿಂನಲ್ಲಿ ಭಾರತ-ಚೀನಾ ಗಡಿಗೆ ಭೇಟಿ ನೀಡಿ ಅಲ್ಲಿನ ಭದ್ರತೆ ಪರಿಶೀಲನೆ ಮಾಡಿದ್ದಾರೆ.

ಈ ಬಗ್ಗೆ ರಕ್ಷಣಾ ಸಚಿವಾಲಯದ ಟ್ವಿಟರ್ ಹ್ಯಾಂಡಲ್‌ ಮೂಲಕ ಪ್ರಕಟಿಸಲಾದ ವೀಡಿಯೋ ಒಂದರಲ್ಲಿ, ನಿರ್ಮಲಾ ಸೀತಾರಾಮನ್‌ ಚೀನಿ ಅಧಿಕಾರಿಯ ಜತೆ ಸಂವಾದ ನಡೆಸುತ್ತಿರುವುದು ಕಾಣಿಸುತ್ತಿದೆ. ಆ

ಈ ಸಂದರ್ಭದಲ್ಲಿ ಚೀನಿ ಅಧಿಕಾರಿಗಳಿಗೆ ಸಚಿವೆ ಎರಡೂ ಕೈಗಳನ್ನು ಜೋಡಿಸಿ ‘ನಮಸ್ತೆ’ ಎಂದು ಅಭಿನಂದನೆ ಮಾಡಿರುವುದನ್ನು ಕಾಣ ಬಹುದಾಗಿದೆ.

ಬಳಿಕ ಚೀನಿ ಅಧಿಕಾರಿ ‘ನಿಮ್ಮ ಭೇಟಿಯಿಂದ ಖುಷಿಯಾಗಿದೆ’ ಎಂಬ ಅರ್ಥವನ್ನು ಊಹಿಸಿ ನುಡಿದರು. ಚೀನಿ ಭಾಷೆಯಲ್ಲಿ ನಮಸ್ಕಾರ ಸೂಚಿಸುವುದನ್ನು ತಮಗೆ ಕಲಿಸುವಂತೆ ಸಚಿವೆ ಚೀನಿ ಅಧಿಕಾರಿಗೆ ಕೇಳಿದರು. ಆಗ ಆ ಅಧಿಕಾರಿ ‘ನಿ ಹೋ’ ಎಂದು ಉತ್ತರಿಸಿದರು.

Like us on facebook

Leave a Reply

Your email address will not be published. Required fields are marked *

*

code

LATEST NEWS