ಜಿಯೋ ಗ್ರಾಹಕರಿಗೆ ಶಾಕಿಂಗ್ .. ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗೆ ಬಿತ್ತು ಬ್ರೇಕ್!

Published on: Friday, October 6th, 2017,8:30 am

ಮುಂಬೈ : ಅನ್ ಲಿಮಿಟೆಡ್ ಕಾಲಿಂಗ್ ಮತ್ತು ಅನ್ ಲಿಮಿಡೆಡ್ ಡಾಟಾ ಆಫರ್ ನೀಡುವ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಸಂಸ್ಥೆ ಇದೀಗ ತನ್ನ ಜನಪ್ರಿಯ ಯೋಜನೆಯಾದ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗೆ ಬ್ರೇಕ್ ಹಾಕಲು ನಿರ್ಧರಿಸಿದೆ.

ಹೌದು, ಇನ್ನು ಮುಂದೆ ಜಿಯೋ ಗ್ರಾಹಕರು ಪ್ರತಿನಿತ್ಯ ಕೇವಲ 300 ನಿಮಿಷಗಳ ವರೆಗೆ ಮಾತ್ರ ವಾಯ್ಸ್ ಕಾಲ್ ಮಾಡಬಹುದು. ಜಿಯೋ ಸಂಸ್ಥೆಯ ಈ ನಿರ್ಧಾರಕ್ಕೆ ಕಾರಣ ಕೆಲ ಖಾಸಗಿ ಸಂಸ್ಥೆಗಳು ತಮ್ಮ ವಾಣಿಜ್ಯಾತ್ಮಕ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿವೆಯಂತೆ. ಹಾಗಾಗಿ ಈ ಅನಲ್ ಲಿಮಿಟೆಡ್ ಕಾಲಿಂಗ್ ಸೇವೆಯನ್ನು ಪಡೆದ ಕೆಲ ಖಾಸಗಿ ಸಂಸ್ಥೆಗಳು ತಮ್ಮ ಉತ್ಪನ್ನಗಳು ಮತ್ತು ತಮ್ಮ ಸಂಸ್ಥೆಯ ಯೋಜನೆಗಳನ್ನು ದೂರವಾಣಿ ಕರೆಗಳ ಮೂಲಕ ಪ್ರಚಾರ ಮಾಡುತ್ತಿವೆಯಂತೆ.

ಸಂಸ್ಥೆಯ ಈ ನಿರ್ಧಾರದಿಂದಾಗಿ ಜಿಯೋ ಗ್ರಾಹಕ ಪ್ರತಿ ತಿಂಗಳು 3 ಸಾವಿರ ನಿಮಿಷಗಳಷ್ಟು ಕರೆಗಳನ್ನು ಮಾತ್ರ ಮಾಡಬಹುದು. ಅಂದರೆ ಪ್ರತಿನಿತ್ಯ 300 ನಿಮಿಷದಂತೆ ಅಥವಾ 7 ದಿನಕ್ಕೆ 1200 ನಿಮಿಷಗಳಷ್ಟು ಮಾತ್ರ ಕರೆ ಮಾಡಬಹುದಾಗಿದೆ.  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಯೋ ಸಂಸ್ಥೆ ವಕ್ತಾರರು, ಈ ನಿರ್ಧಾರ ಹೊಸದೇನೂ ಅಲ್ಲ. ಈ ಹಿಂದೆಯೇ ನಿರ್ಧರಿಸಲಾಗಿತ್ತು. ಸಂಸ್ಥೆಯ ಯಾವುದೇ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡರೆ ಸೇವೆಯನ್ನು ಸ್ಥಗಿತಗೊಳಿಸುವ ಅಧಿಕಾರ ಸಂಸ್ಥೆಗಿದೆ ಎಂದು ಹೇಳಿದ್ದಾರೆ.

Like us on facebook

Leave a Reply

Your email address will not be published. Required fields are marked *

*

code

LATEST NEWS