ನನ್ನ ಮಗ ಭ್ರಷ್ಟನಲ್ಲ : ಅಮಿತ್ ಶಾ ಸ್ಪಷ್ಟನೆ

Published on: Saturday, October 14th, 2017,9:19 am

ಅಹಮದಾಬಾದ್ : ನನ್ನ ಮಗ ಭ್ರಷ್ಟನಲ್ಲ. ನನ್ನ ಮಗ ಜಯ್ ಅಮಿತ್ ಶಾ ಅವರ ಕಂಪೆನಿಯಲ್ಲಿ ಭ್ರಷ್ಟಾಚಾರದ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

2014 ರಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಅಮಿತ್ ಶಾ ಅವರ ಮಗನ ಕಂಪನಿಯ ಲಾಭದ ಮಟ್ಟ ಏರಿಕೆಯಾಗಿದೆ ಎಂದು ಖಾಸಗಿ ಸುದ್ದಿ ಸಂಸ್ಥೆಯ ವೆಬ್ ಸೈಟ್ ವೊಂದು ಸುದ್ದಿ ಮಾಡಿತ್ತು, ಇದಕ್ಕೆ ಸ್ಪಷ್ಟನೆ ನೀಡಿದ ಶಾ ಜಯ್ ಕಂಪನಿಯಲ್ಲಿ ಭ್ರಷ್ಟಾಚಾರದ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಹಾಗೂ ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅಮಿತ್ ಶಾ, ಕಾಂಗ್ರೆಸ್ ಹಲವು ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದೆ. ಆದ್ರೆ ಒಂದು ಬಾರಿಯೂ ಇಂತರ ಆರೋಪದ ವಿರುದ್ಧ ಕೋಟ್ ಮೆಟ್ಟಿಲೇರುವ ಪ್ರಯತ್ನಕ್ಕೆ ಯಾಕೆ ಕೈ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನಿಮ್ಮ ಬಳಿ ದಾಖಲೆಗಳಿದ್ದರೆ ನೀವು ಕೂಡ ಕೋರ್ಟ್ ಗೆ ಹೋಗಬಹುದು ಎಂದು ಹೇಳಿದ್ದಾರೆ.

Like us on facebook

Leave a Reply

Your email address will not be published. Required fields are marked *

*

code

LATEST NEWS