ನಿಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ಗಳಿದ್ದರೆ ತಿಂಗಳಿಗೆ 15,000 ರೂ. ವರೆಗೂ ಹಣ ಮಾಡಬಹುದು

Published on: Wednesday, August 23rd, 2017,6:45 pm

ವಿದ್ಯಾರ್ಥಿಗಳಿಗೆ ಪಾಕೆಟ್ ಮನಿ ಎಷ್ಟಿದ್ದರೂ ಸಾಲೋದಿಲ್ಲ. ಪಾಕೆಟ್ ಮನಿ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಕೆಲವರು ಪಾಲಕರನ್ನು ಪೀಡಿಸಿದ್ರೆ ಮತ್ತೆ ಕೆಲವರು ತಾವೇ ಪಾಕೆಟ್ ಮನಿ ಸಂಪಾದಿಸುತ್ತಾರೆ. ಅನೇಕ ಮೊಬೈಲ್ ಆಪ್ ಗಳು ಇದಕ್ಕೆ ಅವಕಾಶ ಮಾಡಿಕೊಟ್ಟಿವೆ.

note b la

UrbanClap : ಭಾರತದ ಅತಿ ದೊಡ್ಡ ಮೊಬೈಲ್ ಸೇವಾ ಮಾರುಕಟ್ಟೆಯಾಗಿದೆ. ಛಾಯಾಗ್ರಾಹಕ, ಇಲೆಕ್ಟ್ರಿಶಿಯನ್, ಮನೆ ಕ್ಲೀನಿಂಗ್, ಯೋಗ, ವಸ್ತುಗಳ ರಿಪೇರಿ ಸೇರಿದಂತೆ 97 ವಿಭಾಗಗಳಿವೆ. ಅದ್ರಲ್ಲಿ ನಿಮ್ಮ ಕೌಶಲ್ಯ ಬಳಸಿಕೊಂಡು ಹಣ ಗಳಿಸಬಹುದಾಗಿದೆ. ತಿಂಗಳಿಗೆ 10 ಸಾವಿರದಿಂದ 15 ಸಾವಿರದವರೆಗೆ ಆರಾಮವಾಗಿ ಗಳಿಕೆ ಕಾಣಬಹುದಾಗಿದೆ.

Notegen : ಇದು ಪಾಕೆಟ್ ಮನಿ ಗಳಿಸಲು ವಿದ್ಯಾರ್ಥಿಗಳಿಗೆ ಬೆಸ್ಟ್ ಆಪ್. ಈ ಅಪ್ಲಿಕೇಷನ್ ನಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ನೋಟನ್ನು ಅಪ್ಲೋಡ್ ಮಾಡಬೇಕು. ಅದನ್ನು ಬೇರೆಯವರು ಡೌನ್ಲೋಡ್ ಮಾಡಿದ ನಂತ್ರ ಅಪ್ಲೋಡ್ ಮಾಡಿದ ವಿದ್ಯಾರ್ಥಿಗಳಿಗೆ ಹಣ ಸಿಗಲಿದೆ.

app la

Roposo : ಫ್ಯಾಷನ್ ಪದವೀಧರರು ಹಾಗೂ ಫ್ಯಾಷನ್ ವಿದ್ಯಾಭ್ಯಾಸ ಮಾಡ್ತಿರುವ ವಿದ್ಯಾರ್ಥಿಗಳು ತಮ್ಮ ವಿನ್ಯಾಸಗಳನ್ನು ಇದ್ರಲ್ಲಿ ಅಪ್ಲೋಡ್ ಮಾಡಿ ಹಣ ಕಳಿಸಬಹುದು. ಇದು ಮಹಿಳೆಯರ ಫ್ಯಾಷನ್ ನೆಟ್ವರ್ಕ್ ಆಗಿದೆ.

Canvera : ದೇಶದ ಪ್ರಮುಖ ಆನ್ಲೈನ್ ಫೋಟೋಗ್ರಾಫಿ ಕಂಪನಿಯಾಗಿದೆ. ಇಲ್ಲಿ ಫೋಟೋಗ್ರಾಫರ್ ಗೆ ದೊಡ್ಡ ಅವಕಾಶವಿದೆ. ವಿದ್ಯಾರ್ಥಿಗಳು ಹಾಗೂ ಛಾಯಾಗ್ರಾಹಕರು ತಮ್ಮ ಸುಂದರ ಫೋಟೋಗಳನ್ನು ಇದಕ್ಕೆ ಅಪ್ಲೋಡ್ ಮಾಡಿ ಹಣ ಗಳಿಸಬಹುದಾಗಿದೆ.

OLA : ಇದು ದೇಶದ ಜನಪ್ರಿಯ ಆನ್ಲೈನ್ ಸಾರಿಗೆ ಜಾಲತಾಣವಾಗಿದೆ. ಇದು ವಿದ್ಯಾರ್ಥಿಗಳಿಗೆ ಗಳಿಕೆಗೆ ಅವಕಾಶ ನೀಡಿದೆ. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಚಾಲಕನ ರೂಪದಲ್ಲಿ ಕೆಲಸ ಮಾಡಿ ಹಣ ಗಳಿಸಬಹುದಾಗಿದೆ.

Like us on facebook

Leave a Reply

Your email address will not be published. Required fields are marked *

*

code

LATEST NEWS