ಪಂಜಾಬ್ ನಲ್ಲಿ ಆರ್‌ಎಸ್‌ಎಸ್‌ ಮುಖಂಡನ ಮೇಲೆ ಗುಂಡಿನ ದಾಳಿ, ಸ್ಥಳದಲ್ಲೇ ಸಾವು!

Published on: Wednesday, October 18th, 2017,9:33 am

ಲೂಧಿಯಾನ್‌:  ಆರ್‌ಎಸ್‌ಎಸ್‌ ಮುಖಂಡರೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ.

60 ವರ್ಷದ ರವೀಂದ್ರ ಗೋಸಾಯಿ ಎನ್ನುವವರು ಮೃತಪಟ್ಟವರಾಗಿದ್ದು, ಅವರು  ಇಂದು ಬೆಳಗ್ಗೆ  ಕೈಲಾಸ್‌ ನಗರದಲ್ಲಿ ಶಾಖೆಯಲ್ಲಿ ಭಾಗಿಯಾಗಿ ಮನೆ ಬಳಿ ಬರುತ್ತಿದ್ದ ವೇಳೆಯಲ್ಲಿ  ಬೈಕ್‌ನಲ್ಲಿ ಬಂದ ಕೆಲ ದುಷ್ಕರ್ಮಿಗಳು ಗೋಸಾಯಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

 ಪರಿಣಾಮ ಗೋಸಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿ ನಡೆಸಿ ಆರೋಪಿಗಳು ಪರಾರಿಯಾಗಿದ್ದು, ಈ ಘಟನೆಗೆ ಕಾರಣ ತಿಳಿದು ಬಂದಿಲ್ಲ.

ಈ ಘಟನೆ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Like us on facebook

Leave a Reply

Your email address will not be published. Required fields are marked *

*

code

LATEST NEWS