ಪಾಕ್ ಮೇಲೆ ಮತ್ತೊಮ್ಮೆ ಸರ್ಜಿಕಲ್ ದಾಳಿ : ರಾವತ್ ಎಚ್ಚರಿಕೆ

Published on: Tuesday, September 26th, 2017,8:59 am

ನವದೆಹಲಿ : ಕಳೆದ ವರ್ಷ ನಡೆದಿದ್ದ ನಿರ್ದಿಷ್ಟ ದಾಳಿ ಪಾಕಿಸ್ತಾನ ಉಗ್ರವಾದಕ್ಕೊಂದು ಪಾಠವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪಾಠವನ್ನು ಮತ್ತೆ ಕಲಿಸಲು ನಾವು ಹಿಂಜರಿವುದಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪಾಕ್ ಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ರಾವತ್ ಅವರು, ಒಟ್ಟಾರೆ 778 ಕಿ.ಮೀ. ಗಡಿಯೂದ್ದಕ್ಕೂ ನಾವು ಕಾವಲು ಕಾಯುತ್ತಿದ್ದೇವೆ. ಒಂದು ವೇಳೆ ನಮ್ಮ ಕಣ್ಣು ತಪ್ಪಿಸಿ ಒಳನುಸುಳಲು ಯತ್ನಿಸಿದರೂ ಎದುರಿಸಲು ನ್ಮಮ ಸೇನೆ ಶಕ್ತವಾಗಿದೆ ಎಂದು ಹೇಳಿದ್ದಾರೆ.

ದೇಶದೊಳಗೆ ನುಸುಳುವ ಭಯೋತ್ಪಾದಕರ ದೊಡ್ಡ ದಂಡನ್ನು ಎದುರಿಸಲು ನಾವು ಸದಾ ಸನ್ನದ್ಧವಾಗಿದ್ದೇವೆ. ಒಳನುಸುಳುವ ಉಗ್ರರನ್ನು ಎರಡೂವರೆ ಅಡಿ ಗುಂಡಿ ತೋಡಿ ಹೂತು ಹಾಕುತ್ತೇವೆ ಎಂದು ಸೇನಾ ಮುಖ್ಯಸ್ಥರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

Like us on facebook

Leave a Reply

Your email address will not be published. Required fields are marked *

*

code

LATEST NEWS