ಪೋನಿನಲ್ಲೇ ಡಿಲೀಟ್ ಆದ ಫೋಟೋ ಮತ್ತೆ ಪಡೆಯಬಹುದು, ಹೇಗೆ ಗೊತ್ತಾ..?

Published on: Friday, September 15th, 2017,11:02 am

ಸ್ಪೆಷಲ್ ಡೆಸ್ಕ್ : ಎಲ್ಲರೂ ಸಾಮಾನ್ಯವಾಗಿ ಮೊಬೈಲ್ ಫೋನ್ ಗಳಲ್ಲಿ ಫೋಟೋ ಇಟ್ಟುಕೊಂಡಿರುತ್ತಾರೆ. ಕೆಲವು ಸವಿ ನೆನಪುಗಳ ಫೋಟೋಗಳು. ಮದುವೆ ಫೋಟೋ. ಟ್ರಿಪ್ ಫೋಟೋ. ಕಾಲೇಜು ದಿನಗಳ ಫೋಟೋ. ಹೀಗೆ ಸಾಕಷ್ಟು ಫೋಟೋಗಳನ್ನು  ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡಿರುತ್ತೇವೆ.

ಆದ್ರೆ, ಆಕಸ್ಮಾತ್ ಮೊಬೈಲ್ ಫೋನ್ ಹಾಳಾಗಿ ಹೋದ್ರೆ ಅಥವಾ ಆಕಸ್ಮಾತ್ ಫೋಟೋ ಡಿಲೀಟ್ ಆಗುತ್ತವೆ. ಹೀಗೆ ಹಲವು ಆಕಸ್ಮಿಕ ಕಾರಣಗಳಿಂದ ನಮ್ಮ ಫೋಟೋಗಳು ಡಿಲೀಟ್ ಆಗುತ್ತವೆ‌. ಇದರಿಂದ ಬಹಳ ಬೇಜಾರು ಪಟ್ಟುಕೊಳ್ಳುತ್ತೇವೆ. ಯಾಕಂದ್ರೆ ಮತ್ತೆ ಫೋಟೋಗಳನ್ನು ಪಡೆಯಲು ಆಗುವುದಿಲ್ಲ ಎಂದು.

ಅದಕ್ಕೆ ಒಂದು ಪರಿಹಾರ ಇದೆ. ಹೌದು ಕಂಪ್ಯೂಟರ್ ಸಹಾಯವಿಲ್ಲದೆ ನಿಮ್ಮ ಕಳೆದುಹೋದ ಫೋಟೋಗಳನ್ನು ಮತ್ತೆ ಪಡೆಯಬಹುದು.

ಹೀಗೆ ಮಾಡಿ :
ಮೊದಲು ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಪ್ಲೇ ಸ್ಟೋರ್’ನಲ್ಲಿ Restore Image(super easy) ಎಂಬ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ. ಬಳಿಕ ಅದನ್ನು ಇನ್‌ಸ್ಟಾಲ್ ಮಾಡಿಕೊಂಡು ಅದರಲ್ಲಿ search the image you want to restoreRestored imagesಎಂಬ ಆಪ್ಷನ್ ಇರುತ್ತವೆ.

ಮೊದಲನೆಯದನ್ನು ನೀವು ಕ್ಲಿಕ್ ಮಾಡಿದಾಗ ನೀವು ಆ ಫೋನಿನಲ್ಲಿ ಡಿಲೀಟ್ ಆದ ಪೋಟೋಸ್ ಎಲ್ಲಾ ಸಿಗುತ್ತದೆ. ಅದರಲ್ಲಿ ನಿಮಗೆ ಯಾವುದು ಬೇಕೋ ಅವನ್ನು ಸೆಲೆಕ್ಟ್ ಮಾಡಿಕೊಂಡು ಪುನಃ restore ಮಾಡಿ. ಅವುಗಳು ನಿಮ್ಮ ಫೋನಿನಲ್ಲಿ ಸೇವ್ ಆಗುತ್ತದೆ.

ಎರಡನೇ ಆಫ್ಷನ್ -ನೀವು ಯಾವ ಫೋಟೋಗಳನ್ನು ರೀಸ್ಟೋರ್ ಮಾಡಿದ್ದೀರೋ ಅವೆಲ್ಲ ಅಲ್ಲಿ ಕಾಣ ಸಿಗುತ್ತವೆ. ಹಾಗಿದ್ರೆ ಯಾಕೆ  ತಡ ಒಮ್ಮೆ ಟ್ರೈ ಮಾಡಿನೋಡಿ. ಕಳೆದುಕೊಂಡ ಫೋಟೋಗಳನ್ನು ಮತ್ತೆ ಪಡೆಯಿರಿ.

Like us on facebook

Leave a Reply

Your email address will not be published. Required fields are marked *

*

code

LATEST NEWS