ಪೋರ್ಚುಗಲ್, ಸ್ಪೇನ್ ನಲ್ಲಿ ಕಾಡ್ಗಿಚ್ಚು : 32 ಮಂದಿ ಬಲಿ

Published on: Wednesday, October 18th, 2017,1:46 pm

ಸ್ಪೇನ್ : ಪೋರ್ಚುಗಲ್ ಸ್ಪೇನ್ ನಲ್ಲಿ ಉಂಟಾದ ಕಾಡ್ಗಿಚ್ಚಿಗೆ ಒಂದು ತಿಂಗಳ ಮಗು ಸೇರಿದಂತೆ 32 ಮಂದಿ ಬಲಿಯಾಗಿರುವ ಘಟನೆ ಲಿಸ್ಬನ್ ನಿಂದ 200 ಕಿ.ಮೀ ದೂರದಲ್ಲಿರುವ ತಬುವಾ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಘಟನೆಯಲ್ಲಿ 32 ಮಂದಿ ಮೃತಪಟ್ಟಿದ್ದು, ಏಳು ಜನರು ನಾಪತ್ತೆಯಾಗಿದ್ದಾರೆ. ಹಾಗೂ 56 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 16 ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಬೆಂಕಿಯ ಜ್ವಾಲೆಗೆ ನಾಗರಿಕರ ಮನೆಗಳು, ರೈತರ ಜಮೀನುಗಳು ಬೆಂಕಿಗಾಹುತಿಯಾಗಿದೆ.

500 ಸ್ಥಳಗಳಲ್ಲಿ ಸುಮಾರು 600 ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Like us on facebook

Leave a Reply

Your email address will not be published. Required fields are marked *

*

code

LATEST NEWS