ಬಯಲಾಯ್ತು ನಯನತಾರಾ ಫಿಟ್ ನೆಸ್ ರಹಸ್ಯ!

Published on: Tuesday, October 17th, 2017,9:13 am

ಸಿನಿಮಾ ಡೆಸ್ಕ್ : ಟಾಲಿವುಡ್ ಬೆಡಗಿ ನಯನತಾರಾ ವಯಸ್ಸು ಮೂವತ್ತು ದಾಟಿದ್ದರೂ ಈ ಬೆಡಗಿ ಆಕರ್ಷಕ ಸೌಂದರ್ಯನ್ನು ಕಾಪಾಡಿಕೊಂಡಿದ್ದಾರೆ.

ಹೌದು, ಚರ್ಮದ ಸೌಂದರ್ಯವನ್ನೂ ಮುಕ್ಕಾಗದಂತೆ ಕಾಪಾಡಿಕೊಂಡಿರುವ ನಯನತಾರಾ ಮಾಡೆಲಿಂಗ್ ದಿನಗಳಿಂದಲೂ ದೇಹವನ್ನು ಫಿಟ್ ಆಗಿಟ್ಟುಕೊಳ್ಳುವ ಬಗ್ಗೆ ಕಾಳಜಿ ವಹಿಸುತ್ತಿದ್ದರಂತೆ. ನಟಿಯಾದ ಬಳಿಕ ಯೋಗ, ವ್ಯಾಯಾಮವನ್ನು ತಪ್ಪದೇ ರೂಢಿ ಮಾಡಿಕೊಂಡಿರುವ ನಯನ, ಪ್ರತಿನಿತ್ಯ ತಪ್ಪದೇ 8 ತಾಸು ನಿದ್ರಿಸುತ್ತಾರಂತೆ.

ಹಾಗೂ ಎಲ್ಲಾದರೂ ಪ್ರವಾಸಕ್ಕೆ ಹೋದರೆ ತಾವು ಉಳಿದುಕೊಳ್ಳುವ ಹೋಟೆಲ್‌ನಲ್ಲಿ ಜಿಮ್ ಇದೆಯೇ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳುತ್ತಾರೆ. ಚರ್ಮದ ಸೌಂದರ್ಯ ಕಾಪಾಡಿಕೊಳ್ಳಲು ಹೆಚ್ಚು ನೀರು ಕುಡಿಯುತ್ತಾರಂತೆ. ಇದು ನಯನತಾರಾ ಸೌಂದರ್ಯದ ಗುಟ್ಟು.

Like us on facebook

Leave a Reply

Your email address will not be published. Required fields are marked *

*

code

LATEST NEWS