ಬೆಂಗಳೂರು ಮಹಿಳೆಗೆ ವಿಶ್ವಸಂಸ್ಥೆ ಪ್ರಶಸ್ತಿ

Published on: Wednesday, August 30th, 2017,10:30 am

ನವದೆಹಲಿ: ವಿಶ್ವಸಂಸ್ಥೆ-ಭಾರತ ಕೊಡಮಾಡುವ ‘ವಿಮೆನ್ ಟ್ರಾನ್ಸ್’ಫಾರ್ಮ್ ಇಂಡಿಯಾ’ ಪ್ರಶಸ್ತಿಯನ್ನು ರನ್ನರ್ ಅಪ್ ಪ್ರಶಸ್ತಿಯನ್ನು ಬೆಂಗಳೂರು ಮಹಿಳೆ ರಾಜಲಕ್ಷ್ಮಿ ಡಿ. ಬೋರ್ತಕೂರ್ ಅವರು ಪಡೆದುಕೊಂಡಿದ್ದಾರೆ.
ಇಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

rajalakshmi la
ರಾಜಲಕ್ಷ್ಮಿ ಡಿ. ಬೋರ್ತಕೂರ್ ಬೆಂಗಳೂರಿನ ಟೆರ್ರಾಬ್ಲೂ ಎಕ್ಸ್’ಟಿ ಎಂಬ ಸಂಸ್ಥೆಯ ಸ್ಥಾಪಕ, ಸಿಇಓ ಆಗಿದ್ದು, ಮೂರ್ಛೆರೋಗವನ್ನು ಪತ್ತೆಮಾಡುವ ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ. ಅವರ ಈ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ವಿಶ್ವಸಂಸ್ಥೆ-ಭಾರತವು ಈ ಪ್ರಶಸ್ತಿಯನ್ನು ನೀಡುತ್ತಿದೆ.

ಮೂಲತ: ಅಸ್ಸಾಮ್’ರವರಾಗಿರುವ ರಾಜಲಕ್ಷ್ಮಿ, 18 ವರ್ಷಗಳಿಂದ ಸಾಫ್ಟ್’ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಇನ್ಫೋಸಿಸ್, ಅರ್ನ್ಸ್ಟ್ & ಯಂಗ್ ಮುಂತಾದ ಕಂಪನಿಗಳಲ್ಲಿ ಕೆಲಸ ಮಾಡಿರುವ ಅವರು, 2015ರಲ್ಲಿ ತಮ್ಮದೇ ಆದ ಸ್ಟಾರ್ಟಪನ್ನು ಆರಂಭಿಸಿದ್ದಾರೆ.

Like us on facebook

Leave a Reply

Your email address will not be published. Required fields are marked *

*

code

LATEST NEWS