ಭಾರತದಲ್ಲಿ 200 ಕೋಟಿ ರೂ. ಬಂಡವಾಳ ಹಾಕುತ್ತಿದೆ ಈ ಕಂಪನಿ

Published on: Wednesday, August 23rd, 2017,2:21 pm

ಹೊಸದಿಲ್ಲಿ :  ಅಲಿಬಾಬಾ ಗ್ರೂಪ್ನ ಮೊಬೈಲ್ ವ್ಯಾಪಾರ ಘಟಕ ಯೂಸಿವೆಬ್ ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ 200 ಕೋಟಿ ರೂ. ಹೂಡಿಕೆ ಮಾಡಲಿದೆ. 5 ಕೋಟಿ ರೂ. ತಮ್ಮ ಪ್ಲಾಟ್ಫಾರ್ಮ್ ಗಾಗಿ ಹೂಡಿಕೆಯ ಮಾಡಲಿದೆ.
ಭಾರತವು ಮೊಬೈಲ್ ಮಾರುಕಟ್ಟೆ ಬಳಕೆದಾರರ ಮತ್ತು ಅಂತರ್ಜಾಲ ಬಳಕೆದಾರರ ಸಂಖ್ಯೆಯಲ್ಲಿ ಬೆಳೆಯುತ್ತಿರುವ ಪ್ರಮುಖ ಮಾರುಕಟ್ಟೆ ಆಗಿರುವುದರಿಂದ , ಜಾಗತಿಕ ಮಾರುಕಟ್ಟೆಯಲ್ಲಿನ ಕುಸಿತದ ನಡುವೆಯೂ, ಇದು ಸ್ಪರ್ಧಿಸಲು ಸಾಧ್ಯವಾಗಿಸುತ್ತದೆ. ಎಂಬುದು ಅಲಿಬಾಬಾ ಗ್ರೂಪ್ ನ ಲೆಕ್ಕಾಚಾರ.

alibaba la 1
ಮೊಬೈಲ್ ಮತ್ತು ಡಿಜಿಟಲ್ ಪ್ರಾಬಲ್ಯವು ಹೆಚ್ಚಾಗಲು, ಮೊಬೈಲ್ ಅಂತರ್ಜಾಲದ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಮತ್ತು ಭಾರತವನ್ನು “ಡಿಜಿಟಲ್ ಇಂಡಿಯಾ “ವನ್ನಾಗಿ ಮಾಡುತ್ತಿದೆ.
ಯುಸಿ ನ್ಯೂಸ್ ಅದರ ಬಳಕೆದಾರರಿಗೆ ಅಪ್ಗ್ರೇಡ್ ವಿಷಯ ಮತ್ತು ಸೇವೆಗಳನ್ನು ಒದಗಿಸಲು ಉದ್ದೇಶಿಸಿದೆ ಮತ್ತು ಹೀಗೆ ಮುಂದೆ ಸಾಗಲು ಬಯಸುತ್ತದೆ ಆದ ಕಾರಣ ಈ ವಿಭಾಗದಲ್ಲಿ ಮಹತ್ವದ ಹೂಡಿಕೆಯನ್ನು ಮಾಡುಲು ಮುಂದಾಗಿದೆ. “ಎಂದು ಕಂಪೆನಿ ಸಿಇಒ ತಿಳಿಸಿದ್ದಾರೆ.

alibaba la 2

ಜಾಗತಿಕ ಮಟ್ಟದಲ್ಲಿ 420 ಮಿಲಿಯನ್ ಬಳಕೆದಾರರೊಂದಿಗೆ, ಯುಸಿ ಬ್ರೌಸರ್ ಬ್ರೌಸಿಂಗ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಉದ್ದೇಶಿಸಿದೆ, ಯುಸಿ ನ್ಯೂಸ್ ಮತ್ತು ವಿ-ಮೀಡಿಯಾ ಪ್ರೋಗ್ರಾಂ ಸುದ್ದಿ, ಕ್ರಿಕೆಟ್, ತಂತ್ರಜ್ಞಾನ, ಮನರಂಜನೆ, ಸಿನೆಮಾ, ಜೀವನಶೈಲಿ, ಆರೋಗ್ಯ, ಹಾಸ್ಯ ಇತ್ಯಾದಿ ಮಾಹಿತಿ ನೀಡಲು ಯುಸಿ ಸುದ್ದಿ ಪ್ರಾರಂಭಿಸಿದೆ ..

ವೀ-ಮೀಡಿಯಾ ರಿವಾರ್ಡ್ ಪ್ಲಾನ್ 2.0 ಅಡಿಯಲ್ಲಿ, ಸುಮಾರು 1000 ಬರಹಗಾರರನ್ನು ಭಾರತ ಮತ್ತು ಇಂಡೋನೇಷ್ಯಾದಲ್ಲಿ ನೇಮಕ ಮಾಡಲಾಗುವುದು ಮತ್ತು ಅವರು ಯುಸಿ ನ್ಯೂಸ್ ಪ್ಲಾಟ್ಫಾರ್ಮ್ ಮೂಲಕ ತಿಂಗಳಿಗೆ ಕನಿಷ್ಟ ರೂ 50,000 ಗಳಿಸಲು ಸಾಧ್ಯವಾಗಬಹುದು ಎಂದು ತಿಳಿಸಿದೆ.

Like us on facebook

Leave a Reply

Your email address will not be published. Required fields are marked *

*

code

LATEST NEWS