ಭಾರತದ ನೇರ ತೆರಿಗೆ ಸಂಗ್ರಹ ಶೇ. 16 ಏರಿಕೆ

Published on: Friday, October 13th, 2017,8:50 am

ನವದೆಹಲಿ : ಭಾರತದ ನೇರ ತೆರಿಗೆ ಸಂಗ್ರಹವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಏಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ ಶೇ. 15.8  ರಷ್ಟು ಏರಿಕೆಯಾಗಿದ್ದು, 3.86 ಲಕ್ಷ ಕೋಟಿ ತಲುಪಿದೆ.

ಪಸಕ್ತ ಹಣಕಾಸು ವರ್ಷದಲ್ಲಿ 9.8 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹಿಸುವ ಅಂದಾಜನ್ನು ಬಜೆಟ್ ನಲ್ಲಿ ತೋರಿಸಲಾಗಿದೆ. ತೆರಿಗೆ ಸಂಗ್ರಹವು ಸೆಪ್ಟಂಬರ್ ನಲ್ಲಿ ಉತ್ತಮವಾಗಿದೆ. ಮುಂಗಡ ತೆರಿಗೆ ಸಂಗ್ರಹವು ಸೆಪ್ಟೆಂಬರ್ ತನಕ 1.77 ಲಕ್ಷ ಕೋಟಿ ರೂ. ಇದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ. 11.5 ಹೆಚ್ಚಳವಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕಾರ್ಪೋರೇಟ್ ಆದಾಯ ತೆರಿಗೆ ಪರ್ಸನಲ್ ಟ್ಯಾಕ್ಸ್ ಅಡ್ವಾನ್ಸ್ ತೆರಿಗೆ ಸಂಗ್ರಹದ ಬೆಳವಣಿಗೆಗೆ ಕ್ರಮವಾಗಿ ಶೇ. 8.1 ಮತ್ತು 30. 1 ರಷ್ಟಿದೆ. ಏಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ 79,660 ಕೋಟಿ ರೂ. ಹಣವನ್ನು ರೀಫಂಡ್ ಮಾಡಲಾಗಿದೆ.

Like us on facebook

Leave a Reply

Your email address will not be published. Required fields are marked *

*

code

LATEST NEWS