ಭಾರತೀಯ ನೌಕಾಪಡೆಗೆ ಐಎನ್ಎಸ್ ಕಿಲ್ತಾನ್ ಸೇರ್ಪಡೆ

Published on: Tuesday, October 17th, 2017,9:16 am

ವಿಶಾಖಪಟ್ಟಣಂ : ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಾಶಕ ಯುದ್ಧ ನೌಕೆ ಈಎನ್ಎಸ್ ಕಿಲ್ತಾನ್ ಅನ್ನು ಪೂರ್ವ ನೌಕಾನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶಕ್ಕೆ ಸಮರ್ಪಿಸಿದ್ದಾರೆ.

ಭಾರತ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿದ ನೌಕೆಯಾಗಿರುವ ಕಿಲ್ತಾನ್, ನಾನಾ ಬಗೆಯ ಅತ್ಯಾಧುನಿಕ ಸಮರ ಸೌಲಭ್ಯಗಳನ್ನು ಒಳಗೊಂಡಿದೆ. ಐಎನ್ಎಸ್ ಕಮೋರ್ಟಾ ಮತ್ತು ಐಎಎಸ್ ಕಡಮಟ್ ನಂತರ ಇದೀಗ ಐಎನ್ಎಸ್ ಕಿಲ್ತಾನ್ ನೌಕಾಪಡೆಗೆ ಸೇರ್ಪಡೆಗೊಂಡಿದೆ.

ಐಎನ್ಎಸ್ ಕಿಲ್ತಾನ್ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದೆ. ನಮ್ಮ ಮೇಕ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಿತವಾದ ಉತ್ಕೃಷ್ಟ ರಕ್ಷಕವಚವಾಗಿದೆ ಎಂದು ನಿರ್ಮಲಾ ಮೆಚ್ಚುಗೆ ವ್ಯಕ್ತಪಡಿಸಿದರು.

Like us on facebook

Leave a Reply

Your email address will not be published. Required fields are marked *

*

code

LATEST NEWS