ಮ್ಯಾಚ್ ಆಡಿ ಸುಸ್ತಾದ ಧೋನಿಗೆ ಮಗಳು ನೀರು ಕುಡಿಸಿದ ಫೋಟೋ ವೈರಲ್!

Published on: Tuesday, October 17th, 2017,8:45 am

ಮುಂಬೈ: ಧೋನಿ ಮುದ್ದಿನ ಮಗಳು ಝಿವಾ ಕೈಯಲ್ಲಿ ನೀರಿನ ಬಾಟಲಿ ಹಿಡಿದು ಮೈದಾನಕ್ಕೆ ಬಂದು ಸುಸ್ತಾಗಿದ್ದ ತಂದೆಯ ಕೈಯಲ್ಲಿ ಕೊಟ್ಟಿದ್ದಾಳೆ. ಜತೆಗೆ ತಂದೆಗೆ ನೀರು ಸಹ ಕುಡಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದೆ.

ಭಾನುವಾರ ರಾತ್ರಿ ವಿರಾಟ್ ಕೊಹ್ಲಿ ಆಲ್ ಹಾರ್ಟ್ ಎಫ್‌‌ಸಿ ಹಾಗೂ ಆಲ್ ಸ್ಟಾರ್ಸ್ ಎಫ್‌ಸಿ ನಡುವಿನ ಸೆಲೆಬ್ರಿಟಿ ಕ್ಲಾಸಿಕೋ ಸ್ನೇಹಾರ್ಥ ನಡೆದ ಫುಟ್ಬಾಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆಲ್ ಹಾರ್ಟ್ ಎಫ್‌ಸಿ ತಂಡ 7-3 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಮುಂಬೈನ ಅಂಧೇರಿ ಸ್ಪೋರ್ಟ್ ಕಾಂಪ್ಲೆಕ್ಸ್‌‌ನಲ್ಲಿ ನಡೆದ ಚಾರಿಟಿ ಮ್ಯಾಚ್‌ನಲ್ಲಿ ಕೊಹ್ಲಿ ಟೀಂ 7-3 ಅಂಕಗಳಿಂದ ರಣಬೀರ್ ಪಡೆಯನ್ನು ಬಗ್ಗುಬಡಿದಿದೆ.

ಟೂರ್ನಿಯಲ್ಲಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಎರಡು ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಧೋನಿ ಮುದ್ದಿನ ಮಗಳು ಝಿವಾ ಕೈಯಲ್ಲಿ ನೀರಿನ ಬಾಟಲಿ ಹಿಡಿದು ಮೈದಾನಕ್ಕೆ ಬಂದು ಸುಸ್ತಾಗಿದ್ದ ತಂದೆಯ ಕೈಯಲ್ಲಿ ಕೊಟ್ಟಿದ್ದಾಳೆ. ಜತೆಗೆ ತಂದೆಗೆ ನೀರು ಸಹ ಕುಡಿಸಿದ್ದಾಳೆ.

Like us on facebook

Leave a Reply

Your email address will not be published. Required fields are marked *

*

code

LATEST NEWS