ವಾಷಿಂಗ್ಟನ್ : ಅಮೆರಿಕಾದಲ್ಲಿ ಮಕ್ಕಳಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಶಾಲೆಯ ಮಾಜಿ ತರಬೇತುದಾರನೋರ್ವ 105 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ಹೌದು, ಇಲ್ಲಿನ ಲಾಸ್ ಏಂಜಲೀಸ್ ಕೌಂಟ್ರಿ ಸುಪೀರಿಯರ್ ಕೋರ್ಟ್ ಮಂಗಳವಾರ ಆತನಿಗೆ 105 ವರ್ಷ ಜೈಲು ಶಿಕ್ಷೆ ವಿಧಿಸಿದೆ. 44 ವರ್ಷದ ರೋನಿ ಲೀ ರೋಮನ್ 105 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ತರಬೇತುದಾರ. ರೋನಿ ಕ್ಯಾಲಿಫೋರ್ನಿಯಾದ ಪ್ರಾಥಮಿಕ ಶಾಲೆಯೊಂದರ ಮಾಜಿ ತರಬೇತುದಾರನಾಗಿದ್ದು, 2002 ರಲ್ಲಿ ಶಾಲಾ ಕಾರ್ಯಕ್ರಮದ ಬಳಿಕ 7 ಜನ ಪುಟ್ಟ ಮಕ್ಕಳಿಗೆ ಕಿರುಕುಳ ನೀಡಿದ್ದ ಆರೋಪವಿತ್ತು.
ಕಳೆದ ಜೂನ್ 7 ರಂದು ಈತನ ವಿರುದ್ಧ ಆರೋಪ ಸಾಬೀತಾಗಿದ್ದು, ಇದೀಗ ಮಗಳ ಲಾಸ್ ಏಂಜಲೀಸ್ ನ ಕೌಂಟ್ರಿ ಸುಪೀರಿಯರ್ ಕೋರ್ಟ್ ರೋನಿಗೆ ಗರಿಷ್ಟ 105 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
Like us on facebook