ಸೂರ್ಯ ಗ್ರಹಣ ನೋಡಲು ನಾಸಾ ವಿಜ್ಞಾನಿಗಳ ಭರ್ಜರಿ ಸಿದ್ಧತೆ, ಹೇಗೆ ನೋಡುತ್ತಾರೆ ಗೊತ್ತಾ ?

Published on: Monday, August 21st, 2017,10:45 am

ಅಮೇರಿಕ : ಇವತ್ತು ಸಂಭವಿಸಲಿರುವ ಸೂರ್ಯಗ್ರಹಣವನ್ನು ನೇರ ವೀಕ್ಷಣೆ ಮಾಡಲು ಅಮೇರಿಕಾದ ನಾಸಾ ವಿಜ್ಞಾನಿಗಳ ತಂಡ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಹೀಲಿಯಂ ತುಂಬಿದ ೫೦ ಬಲೂನ್ ಗಳನ್ನು, ಸುಮಾರು ೮೦ ಸಾವಿರ ಅಡಿ ಎತ್ತರಕ್ಕೆ ಹಾರಿಸಿ ಗ್ರಹಣದ ವೀಕ್ಷಣೆ ಮಾಡಲಿದ್ದಾರೆ. 1979ರ ಬಳಿಕ ಇದೇ ಮೊದಲ ಬಾರಿಗೆ ಅತಿ ದೊಡ್ಡ ಸೂರ್ಯಗ್ರಹಣ ಸಂಭವಿಸುತ್ತಿರುವ ಸೂರ್ಯ ಗ್ರಹಣದ ವೀಕ್ಷಣೆ ಮಾಡಲು ಕೌತುಕರಾಗಿದ್ದೇವೆ ಎಂದು ತಿಳಿಸಿದ್ದಾರೆ.

surya la

1979ರ ಬಳಿಕ ಇದೇ ಮೊದಲ ಬಾರಿಗೆ ಅತಿ ದೊಡ್ಡ ಸೂರ್ಯಗ್ರಹಣ ಸಂಭವಿಸುತ್ತಿದೆ. ಅಮೆರಿಕ, ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಈ ಅತಿದೊಡ್ಡ ಕೌತುಕ ಕಾಣಸಿಗಲಿದೆ. ಇಂದು ಅತೀ ದೊಡ್ಡ ಸೂರ್ಯಗ್ರಹಣವಾಗಿದ್ದು, ಇನ್ನು ಕೆಲವರ ಪ್ರಕಾರ ಇಂದಿನ ಸೂರ್ಯಗ್ರಹಣದ ವೇಳೆ ಭೂಕಂಪ, ಸುನಾಮಿಯೂ ಸಂಭವಿಸಲಿದೆ ಎನ್ನಲಾಗಿದೆ.

 

ಚಂದ್ರಗ್ರಹಣ ಗತಿಸಿದ 2 ವಾರಗಳ ಅಂತರದಲ್ಲಿ ಸೂರ್ಯಗ್ರಹಣ ಸಂಭವಿಸ್ತಿರೋದು ವಿಜ್ಞಾನಿಗಳಿಗೆ ಹಬ್ಬವಾದರೆ, ಜ್ಯೋತಿಷಿಗಳಿಗೆ ಆತಂಕ ಮೂಡಿಸಿದೆ.ನ್ಯೂಯಾರ್ಕ್ ಕಾಲಮಾನ ಪ್ರಕಾರ ಮಧ್ಯಾಹ್ನ 12.05ಕ್ಕೆ ಆರಂಭವಾಗುವ ಸೂರ್ಯಗ್ರಹಣ ಸಂಜೆ 4.09ರ ಹೊತ್ತಿಗೆ ಮುಗಿಯಲಿದೆ. ಭಾರತೀಯ ಕಾಲಮಾನದ ಪ್ರಕಾರ ನಮ್ಮ ದೇಶದಲ್ಲಿ ರಾತ್ರಿ ಆಗಿರುತ್ತದೆ. ಹೀಗಾಗಿ ಇದರ ಎಫೆಕ್ಟ್ ಭಾರತದಲ್ಲಿ ಇರುವುದಿಲ್ಲ.

nasa la

ಪೂರ್ಣ ಗ್ರಹಣದ ವೇಳೆ ಗ್ರಹಣ ಕಾಣಿಸುವ ದೇಶದ ಬಹುತೇಕ ಭಾಗಗಳಲ್ಲಿ ಕತ್ತಲು ಆವರಿಸಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋಗುವ ಮೂಲಕ ಭೂಮಿಯ ಮೇಲೆ ಚಂದ್ರನ ನೆರಳು ಆವರಿಸುವ ಈ ವಿದ್ಯಮಾನವು ಸುಮಾರು ಮೂರು ಗಂಟೆಗಳ ಕಾಲ ನಡೆಯಲಿದೆ.
ಈ ಖಗ್ರಾಸ ಸೂರ್ಯಗ್ರಹಣವನ್ನು ಬರೀಗಣ್ಣಿನಿಂದ ನೋqಬಾರದು. ಯಾಕೆಂದರೆ ಇದರಿಂದ ಕಣ್ಣಿನ ರೆಟಿನಾ (ಅಕ್ಷಿಪಟಲ) ಸುಟ್ಟು ಹೋಗಬಹುದು ಅಥವಾ ಕಣ್ಣಿನಲ್ಲಿ ಶಾಶ್ವತ ಅಂಧತ್ವ ಉಂಟಾಗಬಹುದು ಎಂದು ಪರಿಣತ ತಜ್ಞರು ಎಚ್ಚರಿಕೆ ನೀಡಿದ್ದಾರೆ.

Like us on facebook

Leave a Reply

Your email address will not be published. Required fields are marked *

*

code

LATEST NEWS