ಹುಡುಗಿಯರಿಗೆ ಬಿಳಿ ಸ್ಮಾರ್ಟ್ ಫೋನ್ ಯಾಕೆ ಇಷ್ಟ ಗೊತ್ತಾ? ಇಲ್ಲಿದೆ ಓದಿ!

Published on: Friday, September 8th, 2017,9:33 am

ಸ್ಪೇಷಲ್ ಡೆಸ್ಕ್: ಇಷ್ಟ, ಆಯ್ಕೆ ವಿಚಾರ ಬಂದಾಗ ಒಬ್ಬೊಬ್ಬರದ್ದು ಒಂದೊಂದು ಅಭಿರುಚಿ. ಅದರಲ್ಲೂ ಹುಡುಗಿಯರು ಈ ಎರಡು ವಿಷಯದಲ್ಲಿ ತುಂಬಾ ಯೋಚನೆ ಮಾಡುತ್ತಾರಂತೆ. ಅದೇನೇ ಇರಲಿ, ಹುಡುಗಿಯರು ಸ್ಮಾರ್ಟ್ ಫೋನ್ ಖರೀದಿಸುವಾಗ ಹೆಚ್ಚು ಬಿಳಿ ಬಣ್ಣಕ್ಕೆ ಒತ್ತು ಕೊಡುತ್ತಾರೆ. ಇದಕ್ಕೆ ಕೆಲವು ವೈಜ್ಞಾನಿಕ ಕಾರಣಗಳಿವೆ. ಆ ಮೂರು ಸರಳ ಕಾರಣಗಳು ಇಲ್ಲಿವೆ.

* ಸ್ಮಾರ್ಟ್ ಫೋನ್ ಗಳು ಸದ್ಯ ಹುಡುಗಿಯರ ಪಾಲಿಗೆ ಬಳಕೆ ವಸ್ತುಗಳೇನೂ ನಿಜ. ಅಷ್ಟೇ, ಅವರಿಗೆ ಬಿಳಿ ಬಣ್ಣದ ಮೊಬೈಲ್ ಗಳನ್ನ  ಹಿಡಿದು ತಿರುಗಾಡುವುದು ಕೂಡಾ ಫ್ಯಾಷನ್ ಆಗಿಬಿಟ್ಟಿದೆ. ವಿವಿಧ ಬಣ್ಣದ ಉಡುಪುಗಳು ಸಹ ಹುಡುಗಿಯರ ಪಾಲಿಗೆ ಫ್ಯಾಷನ್. ಹುಡುಗಿಯರು ಯಾವಾಗಲೂ ತಮ್ಮ ಸ್ಮಾರ್ಟ್ ಫೋನ್ ನ್ನ ಹ್ಯಾಂಡ್ ಬ್ಯಾಗ್ , ಪಾಕೆಟ್ ನಲ್ಲಿ ಇಡಲ್ಲ. ಬದಲು ಕೈಯಲ್ಲಿ ಹಿಡಿಯಲು ಇಷ್ಟಪಡುತ್ತಾರೆ.

* ಬಿಳಿ ಬಣ್ಣ ಶುದ್ಧತೆಯ ಸಂಕೇತವಾಗಿದೆ. ಆದ್ದರಿಂದ ಅವರು ಬಿಳಿ ಬಣ್ಣದ ಸ್ಮಾರ್ಟ್ ಫೋನ್ ಗಳಿಗೆ ಆದ್ಯತೆ ನೀಡುತ್ತಾರೆ. ಬಿಳಿ ಬಣ್ಣ ಸ್ಮಾರ್ಟ್ ಫೋನ್ ಗಳನ್ನ ಸ್ವಚ್ಛಗೊಳಿಸುವುದು ಸಹ  ಸುಲಭ.

* ಬಿಳಿ ಬಣ್ಣ ಸ್ಮಾರ್ಟ್ ಫೋನ್ ಸಾಮಾನ್ಯ ಬಣ್ಣವಲ್ಲ. ಹೀಗಾಗಿ ಹುಡುಗಿಯರು ಅಪರೂಪದ ಗ್ಯಾಜೆಟ್ ಜೊತೆಗೆ ಇರಲು ಬಯಸುತ್ತಾರೆ. ಆದರೆ  ಹುಡುಗರು ಇದಕ್ಕೆ ತದ್ವಿರುದ್ಧ. ಕೆಲ ಹುಡುಗಿಯರು ಬಿಳಿ ಬಣ್ಣದ ಜೊತೆಗೆ ಪಿಂಕ್ , ಗ್ರೀನ್, ಕಪ್ಪು ಬಣ್ಣವನ್ನ ಸಹ ಇಷ್ಟಪಡುತ್ತಾರೆ. ಅದೇನೇ ಇರಲಿ, ಇನ್ನು ಮುಂದೆ ನೀವು ನಿಮ್ಮ ನಲ್ಲೆಗೆ ಏನಾದರೂ ಉಡುಗೊರೆ ಕೊಡಬೇಕೆಂದುಕೊಂಡಿದ್ದರೆ ಬಿಳಿ ಬಣ್ಣವನ್ನು ಆಯ್ಕೆ ಮಾಡಿ.

Like us on facebook

Leave a Reply

Your email address will not be published. Required fields are marked *

*

code

LATEST NEWS