17 ವರ್ಷದೊಳಗಿನ ಫಿಫಾ ವಿಶ್ವಕಪ್ ಫುಟ್ಭಾಲ್ ಟೂರ್ನಿ : ಕ್ವಾರ್ಟರ್ ಫೈನಲ್ ಗೆ ಇರಾನ್

Published on: Wednesday, October 18th, 2017,1:49 pm

ಗೋವಾ : ಇರಾನ್ ತಂಡ 17 ವಯೋಮಿತಿ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಚೊಚ್ಚಲ ಬಾರಿ ಕ್ವಾರ್ಟರ್ ಫೈನಲ್ ಗೇರಿದ ಸಾಧನೆ ಮಾಡಿದೆ.

ನಿನ್ನೆ ನೆಹರೂ ಸ್ಟೇಡಿಯಂನಲ್ಲಿ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇರಾನ್ ತಂಡ 2-1 ಗೋಲುಗಳ ಮೂಲಕ ಮೆಕ್ಸಿಕೋ ತಂಡಕ್ಕೆ ಶಾಕ್ ನೀಡಿತು.  ಲೀಗ್ ಹಂತದಲ್ಲಿ ಹ್ಯಾಟ್ರೀಕ್ ಗೆಲುವಿನ ಆತ್ಮವಿಶ್ವಾಸದೊಂದಿಗೆ ಕನಕ್ಕಿಳಿದ ಇರಾನ್ ಪರ ಮಹಮ್ಮದ್ ಶರೀಫಿ ಹಾಗೂ ಅಲ್ಲಾಹ್ ಯಾರ್ ಸಯ್ಯದ್ ಗೆಲುವಿನ ಗೋಲು ಸಿಡಿಸಿದರು.

ಮೆಕ್ಇಕೋಗೆ ರಾಬರ್ಡ್ ಡೆ ಲಾ ರೋಸಾ ಮೊದಲಾರ್ಧದ ಅಂತ್ಯದಲ್ಲಿ ಗೋಲು ಸಿಡಿಸಿ ಸೋಲಿನ ಅಂತರವನ್ನು ತಗ್ಗಿಸಿದರು. ಹಿಂದಿನೆರಡು ಪಂದ್ಯದಲ್ಲಿ ಜರ್ಮನಿಯಂಥ ಬಲಿಷ್ಠ ಪಡೆಯನ್ನು ಮಣಿಸಿದ ಇರಾನ್ ಮೊದಲ 12 ನಿಮಿಷದೊಳಗೆ 2 ಗೋಲು ಸಿಡಿಸಿ ಮೇಲುಗೈ ಸಾಧಿಸಿದೆ.

Like us on facebook

Leave a Reply

Your email address will not be published. Required fields are marked *

*

code

LATEST NEWS