ದೆಹಲಿಯಲ್ಲಿ ಮತ್ತೆ ವಾಯುಮಾಲಿನ್ಯ ಹೆಚ್ಚಳ: 319ಕ್ಕೆ ಏರಿದ AQI

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಮತ್ತೆ ಹೆಚ್ಚಾಗಿದ್ದು, ಗುರುವಾರ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 319ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ರಾಜಧಾನಿ ಮತ್ತೆ ‘ಅತಿ ಕಳಪೆ’ (Very Poor) ವಿಭಾಗಕ್ಕೆ ಜಾರಿದೆ.

ಪೂಸಾ ಮತ್ತು ಎನ್‌ಎಸ್‌ಐಟಿ ದ್ವಾರಕಾದಲ್ಲಿ ಗರಿಷ್ಠ 388 AQI ದಾಖಲಾಗಿದೆ. ಚಾಂದಿನಿ ಚೌಕ್‌ನಲ್ಲಿ 387, ಜೆಎನ್‌ಯುನಲ್ಲಿ 380, ಪಂಜಾಬಿ ಬಾಗ್‌ನಲ್ಲಿ 373 ಹಾಗೂ ಛಾವ್ಲಾದಲ್ಲಿ 369 ದಾಖಲಾಗಿದೆ.

ಎನ್‌ಸಿಆರ್‌ನಲ್ಲೂ ಮಾಲಿನ್ಯ ಮುಂದುವರಿದಿದ್ದು, ಗುರುಗ್ರಾಮದಲ್ಲಿ 300, ನೋಯ್ಡಾದಲ್ಲಿ 284, ಗಾಜಿಯಾಬಾದ್‌ನಲ್ಲಿ 280 ಮತ್ತು ಫರಿದಾಬಾದ್‌ನಲ್ಲಿ 270 AQI ವರದಿಯಾಗಿದೆ.

ನವೆಂಬರ್ 15ರವರೆಗೆ ದೆಹಲಿಯಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲೂ ಮಾಲಿನ್ಯದಿಂದ ಹೆಚ್ಚಿನ ಪರಿಹಾರ ನಿರೀಕ್ಷಿಸಲಾಗಿಲ್ಲ.

ದೀಪಾವಳಿಗೂ ಮುನ್ನ ದೆಹಲಿಯ ಸರಾಸರಿ PM2.5 ಪ್ರಮಾಣ ಪ್ರತಿ ಘನ ಮೀಟರ್‌ಗೆ 236 ಮೈಕ್ರೋಗ್ರಾಂ ತಲುಪಿದ್ದು, ಮೂರು ವರ್ಷಗಳಲ್ಲೇ ಗರಿಷ್ಠ ಮಟ್ಟ ದಾಖಲಿಸಿದೆ.