ನವದೆಹಲಿ: ಯೆಮನ್ ಕರಾವಳಿಯ ಕೆಂಪು ಸಮುದ್ರ ಪ್ರದೇಶದಲ್ಲಿ 14 ಭಾರತೀಯರು ಇದ್ದರೆನ್ನಲಾದ ವಿಹಾರ ನೌಕೆಯ ಮೇಲೆ ದಾಳಿ ನಡೆದಿರುವ ಆರೋಪ ಕೇಳಿಬಂದಿದ್ದು, ನೌಕೆಯಲ್ಲಿರುವ ಭಾರತೀಯರ ಸುರಕ್ಷತೆ ಕುರಿತು ಭಾರತ ಸರ್ಕಾರ ಮಾಹಿತಿ ಸಂಗ್ರಹಿಸುತ್ತಿದೆ. ಭಾರತೀಯರ ಸುರಕ್ಷತೆಗೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.

ಕೆಂಪು ಸಮುದ್ರದ ಝುಕಾರ್ ದ್ವೀಪದ ಸಮೀಪ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾ ನೌಕೆಯ ಮೇಲೆ ದಾಳಿ ನಡೆಸಿದೆ ಎಂದು ಹೌತಿ ಬಂಡುಕೋರರು ಆರೋಪಿಸಿದ್ದು, ಈ ಪ್ರದೇಶದ ಅಂತಾರಾಷ್ಟ್ರೀಯ ಹಡಗು ಸಂಚಾರಕ್ಕೆ ಅಪಾಯ ಎದುರಾಗಿದೆ ಎಂದೂ ಹೇಳಿದ್ದಾರೆ. ನೌಕೆಯಲ್ಲಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೌತಿಗಳು ತಿಳಿಸಿದ್ದಾರೆ.
